Wednesday, 16 January 2013

ಮರೆತು ಅರಿತ ನೋವಿನ ಮಹತ್ವವೇನೋ
ಕಲಿತು ಕಳೆದೆ ಐಶ್ವರ್ಯವೇಕೋ 
ಇಲ್ಲದರ ಕೊರಗು ಸಿಹಿ ನೋವೆಕಾಯ್ತೋ 
ಕಲಸಿ ಕರಗಿದ ಭಾವ ಸಾರ
ಬಿಟ್ಟ ಬವಣೆಯ ಚಿಂತೆಯ ಮೋಡ 
ಕರಗಿ ಬಿದ್ದ ಸುಖದ ಸೋನೆ
ಸನ್ಯಾಸಿಗೆ ಸಿಕ್ಕ ಉಡುಗೊರೆಯ ಮನೆ
ಮನದ ದ್ವೀಪದಲ್ಲಿ ಕ್ಷೀರ ಕಾರಂಜಿ
ಸಂಜೆ ಸೂರ್ಯನ ಬೆಳಕಿನ ಆಮಂತ್ರಣ
ಮನದ ಸ್ಮೃತಿ ಪಟಲದ ಚಿತ್ತಾರ
ಹಿಗ್ಗಿ - ಕುಗ್ಗಿ ಪರಿಷ್ಕರಿಸಿದ ನೆನಪುಗಳ ಆಗರ

No comments:

Post a Comment